ಬಲ್ಲಿದ ಬಾಣನ ಬಾಗಿಲ ಕಾಯ್ವರವರು ಭೂತಗಳೇನಯ್ಯಾ?
ಅಪ್ಪ ರೇವಣಸಿದ್ಧ ನೀರುಹೊತ್ತನೆಂಬರು;
ನಮ್ಮ ನೀರು ಹೊರುವವರವರು ಕೂಲಿಕಾರರೇನಯ್ಯಾ?
`ಸರ್ವೇಷಾಂ ಹೃದಿ ಸ್ಥಿತಶ್ಚಂದ್ರಮೌಲೀ'
ಎಂಬ ಶ್ರುತಿವಾಕ್ಯವ ನಂಬು ನಂಬು,
ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ ಎಲೆ ಮನವೆ.
Transliteration Ballida bāṇana bāgila kāyvaravaru bhūtagaḷēnayyā?
Appa rēvaṇasid'dha nīruhottanembaru;
nam'ma nīru horuvavaravaru kūlikārarēnayyā?
`Sarvēṣāṁ hr̥di sthitaścandramaulī'
emba śrutivākyava nambu nambu,
kapilasid'dhamallikārjunana munde ele manave.