ಅನಿರ್ವಾಚ್ಯವೆ ವಾಚ್ಯವಾದಲ್ಲಿ ಹಕಾರವೆನಿಸಿತ್ತು;
ಆ ಹಕಾರವೆ [ನಿರಂಜನ] ಪ್ರಣವವೆನಿಸ್ತಿತ್ತು;
ಆ ನಿರಂಜನ ಜಂಗಮಾಕೃತಿ, ಜಗದಾಧಾರ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Anirvācyave vācyavādadalli hakāravenisitu;
ā hakārave [niran̄jana] praṇavavenistittu;
ā niran̄jana jaṅgamākr̥ti, jagadādhāra nōḍā,
kapilasid'dhamallikārjunā.