ವಚನ - 1730     
 
ಮಾನಾಪಮಾನವೆಂಬುದು ಮನದ ಭ್ರಮೆ ನೋಡಯ್ಯಾ. ಮೇಲಕ್ಕೆ ಕರೆದಡೆ ಮಾನವೆಂಬುದೀ ಲೋಕ; ಮೂಗುವಟ್ಟಡೆ ಅಪಮಾನವೆಂಬುದೀ ಲೋಕ. ತಿರುಗುವ ಭೂಮಿಯೆಲ್ಲ ನಕಾರ ಪ್ರಣವವಾಯಿತ್ತು. ಏಕೈಕವಾದ ಭೂಮಿಯಲ್ಲಿ ಪೀಠವ ಕೊಟ್ಟು ಮನ್ನಿಸುವ ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಹೊಯ್ಯದೆ ಮಾಬನೆ ಕಪಿಲಸಿದ್ಧಮಲ್ಲಿಕಾರ್ಜುನ?