ದೇವರಿಗೆ ಕೃಷಿಯ ನೇಮಕವ ಮಾಡುವರಲ್ಲದೆ,
ದೇವರ ಪ್ರಥಮ ಮುಖ ಭೂಮಿ ಎಂದರಿಯರೀ ಲೋಕ.
ದೇವರಿಗೆ ನದಿಯ ಜಲವೆರೆಯಬೇಕೆಂಬ ನೇಮಕವ ಮಾಡುವರಲ್ಲದೆ,
ದೇವರ ದ್ವಿತೀಯ ಮುಖ ಜಲ ಎಂದರಿಯರೀ ಲೋಕ.
ದೇವರಿಗೆ ದೀವಿಗೆಯ ನೇಮಕವ ಮಾಡುವರಲ್ಲದೆ,
ದೇವರ ತೃತೀಯ ಮುಖ ಜ್ಯೋತಿಯೆಂದರಿಯರೀ ಲೋಕ.
ದೇವರಿಗೆ ತಾಲವೃಂತದ ನೇಮಕವ ಮಾಡುವರಲ್ಲದೆ,
ದೇವರ ಚತುರ್ಥಮುಖ ವಾಯುವೆಂದರಿಯರೀ ಲೋಕ.
ದೇವರಿಗೆ ಆಶ್ರಯವ ಮಾಡಬೇಕೆಂಬ ನೇಮಕವ ಮಾಡುವರಲ್ಲದೆ,
ದೇವರ ಪಂಚಮುಖ ಆಕಾಶವೆಂದರಿಯರೀ ಲೋಕ.
ದೇವರಿಗೆ ಪ್ರಾಣಪ್ರತಿಷ್ಠೆಯ ಮಂತ್ರ ಹೇಳುವರಲ್ಲದೆ,
ದೇವರ ಆರನೆಯ ಮುಖ ಆತ್ಮಪ್ರಾಣವೆಂದರಿಯದೀ ಲೋಕ,
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dēvarige kr̥ṣiya nēmakava māḍuvarallade,
dēvara prathama mukha bhūmi endariyarī lōka.
Dēvarige nadiya jalavereyabēkemba nēmakava māḍuvarallade,
dēvara dvitīya mukha jala endariyarī lōka.
Dēvarige dīvigeya nēmakava māḍuvarallade,
dēvara tr̥tīya mukha jyōtiyendariyarī lōka.
Dēvarige tālavr̥ntada nēmakava māḍuvarallade,
dēvara caturthamukha vāyuvendariyarī lōka.
Dēvarige āśrayava māḍabēkemba nēmakava māḍuvarallade,
dēvara pan̄camukha ākāśavendariyarī lōka.
Dēvarige prāṇapratiṣṭheya mantra hēḷuvarallade,
dēvara āraneya mukha ātmaprāṇavendariyadī lōka,
nōḍā, kapilasid'dhamallikārjunā.