ವಚನ - 1747     
 
ಲಿಂಗಲೀಲೆ ಹೇಳುವಡೆನಗಸಾಧ್ಯ ನೋಡಾ, ಅಯ್ಯಾ. ಭಕ್ತನ ಹಸ್ತದಲ್ಲಿ ಜಂಗಮವಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ; ಜಂಗಮದ ಹಸ್ತದಲ್ಲಿ ಭಕ್ತನಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ. ಜಂಗಮ ಪೂಜಿಸಿದ ಫಲ ಸಂಪದಾದಿ ಮೋಕ್ಷ ಕೊಟ್ಟಿತ್ತು ಭಕ್ತಂಗೆ; ಭಕ್ತ ಪೂಜಿಸಿದ ಫಲ ಜ್ಞಾನಸಂಪದಾದಿ ವೈರಾಗ್ಯ ಕೊಟ್ಟಿತ್ತು ಜಂಗಮಂಗೆ. ಇಂತಪ್ಪ ಲಿಂಗಮೂರ್ತಿಯ ನೋಡಿ ನೋಡಿ, ರೋಮಂಗಳೆಲ್ಲ ನಯನಂಗಳಾದವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.