ಆರಾಧನೆಯ ಮಾಡಿ ಫಲವೇನಯ್ಯಾ,
ಸಂತೃಪ್ತಿವಡೆಯದನ್ನಕ್ಕ?
ಮದುವೆಯಾಗಿ ಫಲವೇನಯ್ಯಾ,
ಮೋಹದ ವಿಘ್ನಂಗಳಾಗದನ್ನಕ್ಕ?
ಭಕ್ತನಾಗಿ ಫಲವೇನಯ್ಯಾ,
ಲಿಂಗಪೂಜೆ ಮಾಡದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಮೋಕ್ಷವ ಹಡೆಯದನ್ನಕ್ಕ?
ಮೋಕ್ಷಮಾದ ಫಲವೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ನಾಮಧೇಯವಳಿಯದನ್ನಕ್ಕ,
ಕೇದಾರ ಗುರುವೆ.
Transliteration Ārādhaneya māḍi phalavēnayyā,
santr̥ptivaḍeyadannakka?
Maduveyāgi phalavēnayya,
mōhada vighnaṅgaḷāgadannakka?
Bhaktanāgi phalavēnayyā,
liṅgapūje māḍadannakka?
Liṅgava pūjisi phalavēnayyā,
mōkṣava haḍeyadannakka?
Mōkṣamāda phalavēnayyā,
kapilasid'dhamallikārjunanemba
nāmadhēyavaḷiyadannakka,
kēdāra guruve.