ವಚನ - 1764     
 
ಒಂದು ಜೋಳಿಗೆಯೊಳಗೆರಡು ಗೋವುಗಳಾಡುತೈದಾವೆ ನೋಡಾ. ಒಂದು ಗೋವದು ಬಹು ಮೋಹನದು; ಒಂದು ಗೋವದು ಬಹು ಕ್ರೂರ ಸ್ವಭಾವದು. ಒಂದು ಗೋವಿನ ಸಾಧನೆಯದು ಕೀಳ ಭವಕ್ಕೆ ಲೇಸು; ಒಂದು ಗೋವಿನ ಸಾಧನೆಯದು ಕಪಿಲಸಿದ್ಧಮಲ್ಲಿಕಾರ್ಜುನನ ಮಂದಿರದ ಸಾಧನೆ ಲೇಸು ನೋಡಾ, ಕೇದಾರ ಗುರುದೇವಾ.