ವನವೊಂದರಲ್ಲಿ ಘನಕಾಸಾರ ಬೆಳೆದುದ ಕಂಡೆ.
ಆ ಘನಕಾಸಾರದಲ್ಲಿ ಮೂರು ಹೂಗಳ ಕಂಡೆ.
ಆ ಮೂರು ಹೂಗಳಲ್ಲಿ ಮೂರು ಮೂರ್ತಿಗಳ ಕಂಡೆ.
ಆ ಮೂರು ಮೂರ್ತಿಗಳಲ್ಲಿ ಮೂಲೋಕದರಸ
ಕಪಿಲಸಿದ್ಧಮಲ್ಲಿಕಾರ್ಜುನನ ಕಂಡು ಕಣ್ದೆರೆದು ಕಂಡೆ, ಕಂಡೆ,
ಕಂಡೆಯಾ ಕೇದಾರ ಗುರುವೆ.
Transliteration Vanada ghanakāsāra beḷedu kaṇḍe.
Ā ghanakāsaradalli mūru hūgaḷa kaṇḍe.
Ā mūru hūgaḷalli mūru mūrtigaḷa kaṇḍe.
Ā mūru mūrtigaḷalli mūlōkadarasa
kapilasid'dhamallikārjunana kaṇḍu kaṇderedu kaṇḍe, kaṇḍe,
kaṇḍeyā kēdāra guruve.