•  
  •  
  •  
  •  
Index   ವಚನ - 1826    Search  
 
ಕಾಮಧೇನುವಿನ ವಂಶವಿವು ಎಂದಡೆ, ಹಿಂಡಲರಿಯವು ನೋಡಾ, ಅವುಗಳು. ಕಾಮಾರಿಯ ರೂಪುಗಳಿವರೆಂದಡೆ, ಅರಿಷಡ್ವರ್ಗಂಗಳಳಿಯಪಡೆಯವು ನೋಡಾ ತ್ರಿಶಕ್ತಿಗಳು. ನಾ ನಿನ್ನವನೆಂದಡೆ [ನಿ]ಮ್ಮ ಮಹಿಮೆಗಳನರಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Kāmadhēnuvina vanśavivu endaḍe, hiṇḍalariyavu nōḍā, mattu. Kāmāriya rūpugaḷivarendaḍe, ariṣaḍvargaṅgaḷaḷiyapaḍeyavu nōḍā triśaktigaḷu. Nā ninnavanendaḍe [ni]m'ma mahimegaḷanariyabāradu nōḍā, kapilasid'dhamallikārjunayya.