ವಚನ - 1836     
 
ಮಂತ್ರ ಮೂರರಲ್ಲಿ ಮಂತ್ರವೆ ಮಂತ್ರ ನೋಡಾ. ಶಕ್ತಿಯ ಮೂರರಲ್ಲಿ ಮಂತ್ರವೆ ಮಂತ್ರ ನೋಡಾ, ಶಿವನ ಮಂತ್ರ ಮೂರರಲ್ಲಿ ಮಂತ್ರವೆ ಮಂತ್ರ ನೋಡಾ. ನವಲಿಂಗದ ಮಂತ್ರ ಮೂರರಲ್ಲಿ ಮಂತ್ರವೆಂಬುದು ತ್ರಿಲೋಕದಲ್ಲಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.