ವಚನ - 1863     
 
ಆಚಾರವಿಲ್ಲದವನ ಗುರು ಕಂಡಡೆ, ವಿಚಾರಿಸಿ ನೋಡನು ಜ್ಞಾನಾಜ್ಞಾನದಲ್ಲಿ. ಆಚಾರವಿಲ್ಲದ ಗುರು, ಆಚಾರವಿಲ್ಲದ ಶಿಷ್ಯ ಇವರೀರ್ವರು ಚರಿಸಿ ಬೆಡಗಿನ ಭವಕ್ಕೆ ಗುರಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.