ವಚನ - 1881     
 
ಎಂಟು ಮಣಿಯ ಮನೆಯಲ್ಲಿ ಕಂಟಕವಿಲ್ಲದ ಮೂರ್ತಿ ತಾ ನಾಟ್ಯವ ಮಾಡುತ್ತಿದೆ ನೋಡಾ. ಆ ಎಂಟು ಮಣಿಯಲ್ಲಿ ತನ್ನಂಟು ಇಲ್ಲದೆ, ತಾ ಸ್ವತಂತ್ರ ನಾಟ್ಯನಾಗಿ ಆಡುತ್ತಿಹ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮೂರ್ತಿಯು.