ವಚನ - 1886     
 
ಜಪವೇನು, ತಪವೇನು, ಸಾಧಿಸುವಾತಂಗದು ದುರ್ಲಭವಲ್ಲವೆ, ಮನವೆ? ನೇಮವೇನು, ನಿತ್ಯವೇನು, ಸಾಧಿಸುವಾತಂಗದು ದುರ್ಲಭ ದೇವಾ. ಪೂಜೆಯ ಸೋಜಿಗತನದ ಮಹಾಮಹತ್ವವೇನು? ಸಾಧಿಸುವಾತಂಗದು ದುರ್ಲಭವಲ್ಲವೆ? ಹೇ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ.