•  
  •  
  •  
  •  
Index   ವಚನ - 1893    Search  
 
ದೀಪದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಮೇಘದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಶಿಶುವಿನಂತಿಹ ಜನ್ಮ ಬದುಕುವುದು ತಿಳಿಯದು, ಬದುಕಿ ಬಾಳೀತೆಂಬುದು ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Dīpadantiha janma bandudu tiḷiyabāradu, hōhudu tiḷiyabāradu. Mēghadantiha janma bandudu tiḷiyabāradu, hōhudu tiḷiyabāradu. Śiśuvinantiha janma badukuvudu tiḷiyadu, baduki bāḷītembudu tiḷiyabāradu nōḍā, kapilasid'dhamallikārjunā.
Music Courtesy: