ವೇದವನೋದಿ ವೇದಾಧ್ಯಯನವ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
ಬ್ರಹ್ಮವೇತ್ತುಗಳ ಶುಕ್ಲಶೋಣಿತದಿಂದ ಜನಿಸಿದಡೇನು,
ಬ್ರಾಹ್ಮಣನಾಗಬಲ್ಲನೆ?
ಯಜನಾ[ದಿ ಇ] ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
`ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ' ಎಂಬ ವೇದವಾಕ್ಯವನರಿದು,
ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Vēdavanōdi vēdādhyayanava māḍidaḍēnu,
brāhmaṇanāgaballane?
Brahmavēttugaḷa śuklaśōṇitadinda janisidaḍēnu,
brāhmaṇanāgaballane?
Yajanā[di ī] ṣṭa ṣaṭkarmaṅgaḷa biḍade māḍidaḍēnu,
brāhmaṇanāgaballane?
`Brahma jānāti iti brāhmaṇaḥ' emba vēdavākyavanaridu,
brahmabhūtanādātane brāhmaṇa nōḍā,
kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ