•  
  •  
  •  
  •  
Index   ವಚನ - 1913    Search  
 
ದೇಶವ ತಿರುಗಿದಡೇನು, ಕಾಶೀ ರಾಮೇಶ್ವರ ಯಾತ್ರೆಯ ಮಾಡಿದಡೇನು, ಕೋಶತ್ರಯವನರಿದು ದಾಂಟದನ್ನಕ್ಕ? ದೇಶವ ತಿರುಗಿದಲ್ಲಿ ಲಕ್ಷಣಾಲಕ್ಷಣಾವಲೋಕನವೆ ಪ್ರಾಪ್ತಿ ; ಯಾತ್ರೆಯ ಮಾಡಿದಲ್ಲಿ ಮೂಢಜನಕ್ಕೆ ಸಾಧುದೃಷ್ಟತ್ವವೆ ಪ್ರಾಪ್ತಿ. ಕೋಶತ್ರಯವ ದಾಂಟಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಸ್ವಭಾವವೆ ಪ್ರಾಪ್ತಿ ನೋಡಾ, ಕೇದಾರಯ್ಯಾ.
Transliteration Dēśava tirugidaḍēnu, kāśī rāmēśvara yātre māḍidaḍēnu, kōśatrayavanaridu dāṇṭadannakka? Dēśava tirugida lakṣaṇālakṣaṇāvalōkanave prāpti; yātreyalli mūḍhajanakke sādhudr̥ṣṭatvave prāpti. Kōśatrayava dāṇṭiyalli kapilasid'dhamallikārjuna svabhāvavē prāpti nōḍā, kēdārayya.