•  
  •  
  •  
  •  
Index   ವಚನ - 1920    Search  
 
ಸಾಂಬನಾಗಲಿ, ಶಿವನೆ ತಾನಾಗಲಿ, ಪಂಚಭೌತಿಕಕ್ಕೆ ಬಂದ ಬಳಿಕ ಕೇಡೆಂಬುದು ನಿಶ್ಚಯ. ಭೌತಿಕದಲ್ಲಿ ಕೇಡು ನಿಶ್ಚಯವಲ್ಲದೆ, ಮಹಾ ಅರುಹಿನಲ್ಲಿ ಕೇಡಿಲ್ಲ. `ತತ್ತ್ವಾತ್ಮಕಂ ವಪುರ್ದೇವಿ ನಾಶಾರ್ಥಂ ಕಾರಣಂ ದೃಢಂ' ಎಂಬುದು ಪುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sāmbanāgali, śivane tānāgali, pan̄cabhautikakke banda baḷika kēḍembudu niścaya. Bhautikadalli kēḍu niścayavallade, mahā aruhinalli kēḍilla. `Tattvātmakaṁ vapurdēvi nāśārthaṁ kāraṇaṁ dr̥ḍhaṁ' embudu pusiyalla nōḍā, kapilasid'dhamallikārjunā.