•  
  •  
  •  
  •  
Index   ವಚನ - 1930    Search  
 
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರುಗೊಂಡೆನಯ್ಯಾ. ವಿತ್ತಾಪಹಾರಿ ಗುರುಗಳು ನೂರಾರು; ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು; ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು; ಸತ್ಕರ್ಮೋಪದೇಶವನರುಹಿ ಸ್ವರ್ಗಮರ್ತ್ಯದಲ್ಲಿ ಸುಖವೀವ ಗುರುಗಳು ನೂರಾರು; ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು. ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು; ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ನೂರಾರು; ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Lōkadalliha nūrāru gurugaḷa nōḍi nōḍi nānu bēsarugoṇḍenayyā. Vittāpahāri gurugaḷu nūrāru; śāstrārtha hēḷuva gurugaḷu nūrāru; mantratantradindubhaya lōkadalli sukhaduḥkhavīva gurugaḷu nūrāru; satkarmōpadēśavanaruhi svargamartyadalli sukhavīva gurugaḷu nūrāru; vicāramukhadinda ṣaṭsādhaneyanaruhuva Gurugaḷu nūrāru. Viṣayaṅgaḷella mithyaṅgaḷendaruhi ātmānurāgatvavanīva gurugaḷu nūrāru; śivajīvara ēkatvavanaruhi nirmalajñānavīva gurugaḷu nūrāru; sanśayāḷigaḷanella jñānāgniyinda dahisi muktiya haṅgembuda aruhina bandhadallirisida guru cennabasavaṇṇanallade mattōrvana kāṇe nōḍā, kapilasid'dhamallikārjunā.