•  
  •  
  •  
  •  
Index   ವಚನ - 1933    Search  
 
ಮಾಡುವ ಕ್ರಿಯಾಕ್ರಿಯೆಗಳು ಸುಖದುಃಖಗಳಿಗಲ್ಲದೆ, ಭವವೀಡಾಡವು; ಮೃಡನ ಪದ ದೊರೆಯದು ನೋಡಾ. ಮಾಡುವ ಕ್ರಿಯೆ ಮನೋಧರ್ಮ, ಮಾಡದ ಕ್ರಿಯೆ ಚಿತ್ತಿನ ಧೈರ್ಯ, ತಾನರಿದ ಮನೋತೀತ ಮಾಡುವನಲ್ಲ, ಇದ್ದು ಬಿಡುವನಲ್ಲ, ಬಿಟ್ಟು ಭವಭಾರಿಯಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ.
Transliteration Māḍuva kriyākriyegaḷu sukhaduḥkhagaḷigallade, bhavavīḍāḍavu; mr̥ḍana pada doreyadu nōḍā. Māḍuva kriye manōdharma, māḍada kriye cittina dhairya, tānarida manōtīta māḍuvanalla, iddu biḍuvanalla, biṭṭu bhavabhāriyalla, kapilasid'dhamallikārjuna guruve.