•  
  •  
  •  
  •  
Index   ವಚನ - 1938    Search  
 
ತಾನು ಪ್ರಪಂಚಿಕನಾಗಿ ಪರಮಾರ್ಥವ ಪಡೆಯಬೇಕೆಂಬಾಶೆಯುಳ್ಳಡೆ, ಪರಧನ ಪರಸ್ತ್ರೀಯರ ವಿವರ್ಜಿಸಿ ಪೂಜಿಸುವ ಪರಶಿವನ. ತಾನು ಪ್ರಪಂಚಿಯಾಗಿ ಕೀರ್ತಿಯ ಪಡೆಯಬೇಕೆಂಬಾಶೆಯುಳ್ಳಡೆ, ಜೀವದಯಾಪರತ್ವ, ಮೃಷಾಭಾಷಾನಿರಾಕರಣತ್ವ, ಯಾಚಕರೊಳ್ಧಾತೃತ್ವವ ಮಾಡಿ [ಪೂಜಿಸುವ] ನೋಡಾ ಪರಶಿವನ. ಇದೆ ಅಂತರಂಗದ ವಿಚಾರ, ಇದೆ ಬಹಿರಂಗದಲ್ಲಿ ಭೂಷಣ. ಇದೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಬೊಮ್ಮ ತಾನು, ಕಂಡೆಯಾ ಬೊಮ್ಮಯ್ಯಾ.
Transliteration Tānu prapan̄cikanāgi paramārthava paḍeyabēkembāśeyuḷḷaḍe, paradhana parastrīyara vivarjisi pūjisuva paraśivana. Tānu prapan̄ciyāgi kīrtiya paḍeyabēkembāśeyuḷḷaḍe, jīvadayāparatva, mr̥ṣābhāṣānirākaraṇatva, yācakaroḷdhātr̥tvava māḍi [pūjisuva] nōḍā paraśivana. Ide antaraṅgada vicāra, ide bahiraṅgadalli bhūṣaṇa. Ide kapilasid'dhamallikārjunanemba mahābom'ma tānu, kaṇḍeyā bom'mayya.