ವಚನ - 1945     
 
ತಿಳಿದೆ ನಾ ತಿಳಿದೆ ನಾ ಎಂದು ಹಲಬರು ಹೋದರು ಅಹಂಕಾರದಲ್ಲಿ. [ತಿಳಿಯೆ ನಾ]ತಿಳಿಯೆ ನಾ ಎಂದು ಹಲಬರು ಹೋದರು ಮರವೆಯಲ್ಲಿ. ತಿಳಿದೆನೆಂಬುದು ತಿಳಿಯೆನೆಂಬುದು ಜ್ಞಾನದ ಮೈದೊಡಕು. ತಿಳಿಯೆ ಅರಿವು ಮರವೆಯೆಂಬುಭಯವ ತಿಳಿದು ತಿಳಿಯದಂತಿರೆ, ತಿಳಿನೀರ ನಳಿನಾಕ್ಷನುತ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ.