Index   ವಚನ - 6    Search  
 
ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು ತ್ರಿಪುರವ ದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು ಗಜಾಸುರನ ಕೊಂದು ಚರ್ಮವ ಹೊದೆವಲ್ಲಿ ಉಗ್ರನೆಂಬ ಗಣೇಶ್ವರನಾಗಿರ್ದನು ಬ್ರಹ್ಮಕಪಾಲವಿಡಿದು ವಿಷ್ಣು ಕಂಕಾಳವನಿಕ್ಕಿದಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು ಪ್ರಾಣಲಿಂಗಸಂಗದಲ್ಲಿ ವೃಷಭನೆಂಬ ಗಣೇಶ್ವರನಾಗಿರ್ದನು ಜಂಗಮದ ಪೂರ್ವಾಶ್ರಯವ ಕಳೆದು ಪೂನರ್ಜಾತನೆನಿಸಿ ಪ್ರಾಣಲಿಂಗವಾದ ಬಳಿಕ ಕೂಡಲಚೆನ್ನಸಂಗನಲ್ಲಿ ಬಸವನೆಂಬ ಗಣೇಶ್ವರನಾಗಿರ್ದನು