Index   ವಚನ - 10    Search  
 
ಮೀನಜ ರೋಮಜ ಋಷಿಯರು ಮೊದಲಾದ ಅನಂತಕೋಟಿ ಹರಿ ಬ್ರಹ್ಮರಿಲ್ಲದಂದು, ಅಲ್ಲಿಂದತ್ತತ್ತ ನೀನೇ ಕೋಲಿಂಗನೊಬ್ಬನೆ ಶರಣ. ಗುರುವೆ ಪರಮಗುರುವೆ ನೀನೆ ಗತಿಯಯ್ಯಾ. ಆದಿಕುಳಕ್ಕೆ ಮೂಲಿಗನಾಗಿ ಸುಳುಹ ತೋರಿ ಜಗವ ಪಾವನವ ಮಾಡಬಂ[ದೆಯಯ್ಯಾ] ಬಹುಮುಖ ಜೀವಿಗಳಿಗೆ ಬಹುಮುಖ ಪ್ರಸಾದವ ತೋರಿದೆಯಯ್ಯಾ ಭುವನವ ಸಲಹಲೆಂದು ಅವತರಿಸಿದೆಯಯ್ಯಾ ಆದಿಲಿಂಗ ಅನಾದಿ ಶರಣನೆಂಬುದು ತಪ್ಪದು! ಆ ಲಿಂಗವನು ನೀ ಪುಟ್ಟಿಸಿದ ಘಟಕ್ಕೆ ಕಾರುಣ್ಯವ ಮಾಡಿ ಸಲಹಯ್ಯಾ ಕೂಡಲಚೆನ್ನಸಂಗಮದೇವಾ.