Index   ವಚನ - 12    Search  
 
ಅಂಜದಿರಿ ಅಂಜದಿರಿ ಅನಿಮಿಷನಂತೆ ಬೇಡುವವ ನಾನಲ್ಲ. ನಿಮ್ಮ ಪ್ರಮಥರ ಮುಂದೆ ನಿಮಗೆ ಅಹುದಹುದೆನಲು ನಿಮಗನಾದಿಯ ಶಿಶು ನಾನೆ ಅಯ್ಯಾ. ಅದೆಂತೆಂದರೆ: ಅಂಜನೆಗೆ ಜಲಗರ ಬೆಳೆಯಿತೆಂದು ಅಂಜಿ ಹೇಮರಸವ ಕುಡಿದಲ್ಲಿ ಒಳಗಿದ್ದ ಕಪಿ ಶೃಂಗಾರವಾಗನೆ? ಕೆಡುವುದೆ ಶಿವಪಿಂಡವು? ಮರೆವುದೆ ಶಿವಜ್ಞಾನವು? ಹಿಂದೆ ಏಳುನೂರು ವರುಷ ಮಂಡೋದರಿಯ ಬಸುರಲ್ಲಿದ್ದು ಉದಯಂಗೆಯ್ಯನೆ ಇಂದ್ರಜಿತು? ನಾನು ಹೊಟ್ಟೆಯಲ್ಲಿಇದ್ದಂದು ನೀವು ಹೊಟ್ಟೆಗೆ ವಿಭೂತಿಯ ಪಟ್ಟವ ಕಟ್ಟಿದಂದೆ ಅನುಗ್ರಹವಾಯಿತ್ತು. ಕೂಡಲಚೆನ್ನಸಂಗಮದೇವಾ ನಿಮ್ಮ ತೊತ್ತಿನ ತೊತ್ತು ನಾನು ಚೆನ್ನಬಸವಣ್ಣನು ಕಾಣಾ ಸಂಗನ ಬಸವಣ್ಣ.