Index   ವಚನ - 17    Search  
 
ಆನು ಶುದ್ಧಧವಳಿತನು, ಎನಗೆ ಅನಾದಿ ಬಂದು ಹೊದ್ದಿದ ಕಾರಣವೇನಯ್ಯಾ? ಜಲವ ಮೊಗೆಯೆ ಬಂದೆನೇಕಯ್ಯಾ? ಗಿಡುವ ಹರಿಯ ಬಂದೆನೇಕಯ್ಯಾ? ಎಲ್ಲರ ನಡುವೆ ಕುಳ್ಳಿರ್ದು ಗೀತವ ಹಾಡಬಂದೆನೇಕಯ್ಯಾ? ಬಸವಣ್ಣ ಚೆನ್ನಬಸವಣ್ಣಯೆಂಬೆರಡು ಶಬ್ದವೇಕಾದವು ಹೇಳಾ, ಕೂಡಲಚೆನ್ನಸಂಗಮದೇವಾ?