ಚರಣವಿಡಿದಂಗೆ ಕರುಣಿ
ಕಂದೆರವೆಯ ಮಾಡಬೇಕೆಂದು,
ಮರಹಿಂದ ಬಂದ ಕಾಯದ ಕರ್ಮವ ಕಳೆದು
ಗುರುಲಿಂಗವು ಕರುಣಿಸಿ ಕಂದೆರವೆಯ ಮಾಡಿದ
ಪ್ರಾಣಲಿಂಗ ಸಂಬಂಧವೆಂತಿದ್ದುದೆಂದರೆ:
ಆಲಿ ನುಂಗಿದ ನೋಟದಂತೆ,
ಬಯಲು ನುಂಗಿದ ಬ್ರಹ್ಮಾಂಡದಂತೆ,
ಮುತ್ತು ನುಂಗಿದ ಉದಕದಂತೆ,
ಪುಷ್ಪ ನುಂಗಿದ ಪರಿಮಳದಂತೆ ಇಪ್ಪ
ಮಹಾನುಭಾವದ ನುಡಿಗೆ ಎನ್ನೊಡಲಗುರಿ ಮಾಡಿದೆನಾಗಿ,
ಎನ್ನ ಒಡಲ ಪರ್ಯಾಯ ಕೆಟ್ಟಿತ್ತಯ್ಯಾ, ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Caraṇaviḍidaṅge karuṇi
kanderaveya māḍabēkendu,
marahinda banda kāyada karmava kaḷedu
guruliṅgavu karuṇisi kanderaveya māḍida
prāṇaliṅga sambandhaventiddudendare:
Āli nuṅgida nōṭadante,
bayalu nuṅgida brahmāṇḍadante,
muttu nuṅgida udakadante,
puṣpa nuṅgida parimaḷadante ippa
mahānubhāvada nuḍige ennoḍalaguri māḍidenāgi,
enna oḍala paryāya keṭṭittayyā, kūḍalacennasaṅgamadēvā.