Index   ವಚನ - 29    Search  
 
ಗುರುಶಿಷ್ಯ ಸಂಬಂಧವನು ಏನೆಂದುಪಮಿಸುವೆನಯ್ಯ! ಗುರುವಿನ ಒಂದಾಗಿ ಹೋಗಲುಬಾರದು, ಅವರಿದ್ದೂರಲಿರಲಾಗದು. ಗಣತಿಂಥಿಣಿಯಲ್ಲಿ ಕುಳ್ಳಿರಲಾಗದು, ಅವರ ಸಹಪಙ್ತಿಯಲ್ಲಿ ಕುಳಿತು ಲಿಂಗಾರ್ಚನೆಯ ಮಾಡಲಾಗದು, ಅವರಂಥವರಿಂಥವರೆಂದು ಕನಸಿನಲ್ಲಿ ಮನಸಿನಲ್ಲಿ ನೆನೆದಡೆ ಅಘೋರನರಕವಯ್ಯಾ ಕೂಡಲಚೆನ್ನಸಂಗಯ್ಯಾ.