Index   ವಚನ - 49    Search  
 
ಪರುಷದ ಪರ್ವತದಲ್ಲಿ ಕಬ್ಬುನಂಗಳುಂಟೆ ಅಯ್ಯಾ? ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ ಅವಗುಣಂಗಳುಂಟೆ ಅಯ್ಯಾ? ಭಕ್ತಕಾಯ ಮಮಕಾಯ ಕೂಡಲಚೆನ್ನಸಂಗಮದೇವ ನಿಮ್ಮ ಶರಣ.