Index   ವಚನ - 66    Search  
 
ಭಕ್ತನೆಂತೆಂಬೆನಯ್ಯಾ ಭಕ್ತಿಸ್ಥಲವೆನಗೆ ಮುನ್ನಿಲ್ಲ, ಯುಕ್ತನೆಂತೆಂಬೆನಯ್ಯಾ ಯುಕ್ತಿಸ್ಥಲವೆನಗೆ ಮುನ್ನಿಲ್ಲ, ಮುಕ್ತನೆಂತೆಂಬೆನಯ್ಯಾ ಮುಕ್ತಿಸ್ಥಲವೆನಗೆ ಮುನ್ನಿಲ್ಲ, ಕೂಡಲಚೆನ್ನಸಂಗನ ಶರಣರಿಗೆ ನಮೋ ನಮೋಯೆಂದು ಬದುಕುವೆ.