Index   ವಚನ - 77    Search  
 
ಪವನಸಾಧಕರೆಲ್ಲ ಕವಳವಳಿಸಿ ಹೋದರು. ತನುಸಾಧಕರೆಲ್ಲ ಬುದ್ಧಿಗೇಡಿಯಾದರು. ತತ್ತ್ವಸಾಧಕರೆಲ್ಲ ಭಕ್ತಿಹೀನರಾದರು. ಲಿಂಗಸಾಧಕರೆಲ್ಲ ಅಂಗಹೀನರಾದರು. ಪ್ರಸಾದಸಾಧಕರೆಲ್ಲ ವ್ರತಗೇಡಿಗಳಾದರು. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಸವಣ್ಣ ಜಂಗಮ ಸಾಧಕನಾಗಿ ಸ್ವಯಲಿಂಗವಾದ.