Index   ವಚನ - 83    Search  
 
ತನ್ನ ತನುವನೊಪ್ಪಿಸಿದನಯ್ಯಾ ಭಕ್ತನು, ತನ್ನ ಮನವನೊಪ್ಪಿಸಿದನಯ್ಯಾ ಭಕ್ತನು. ತನ್ನ ಧನವನೊಪ್ಪಿಸಿದನಯ್ಯಾ ಭಕ್ತ[ನು] ತನ್ನ ಅಂತರಂಗದಾತ್ಮಸುಖಕ್ಕೆ ಈ ತ್ರಿವಿಧವನು ಶ್ರೀಗುರು ಹೇಳಿದಂತುಟಂ ಬಿಟ್ಟ ವ್ರತಗೇಡಿಯ ತೋರದಿರು ಕೂಡಲಚೆನ್ನಸಂಗಮದೇವಾ.