Index   ವಚನ - 90    Search  
 
ಲಿಂಗೈಕ್ಯ[ರ]ಲ್ಲದವರನೊಲ್ಲ ಲಿಂಗಧಾರಿ. ಲಿಂಗಾರ್ಚನೆಯ ಕಾಲದಲ್ಲಿ, ಪ್ರಸಾದ ಭೋಗದ ಕಾಲದಲ್ಲಿ, ಅಂಗದ ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ ಪಂಚಮಹಾಪಾತಕವೆಂದುದಾಗಿ "ಲಿಂಗೈಕ್ಯಂ ಲಿಂಗಧಾರೀಣಾಂ ಅಂಗಬಾಹ್ಯೇ ವಿಧೀಯತೇ| ಭವೀನಾಂ ಪಾಪದೃಷ್ಟೀನಾಂ ಪ್ರಚ್ಛನ್ನಪಟಮುತ್ತಮ್"|| ಎಂದುದಾಗಿ ಭವಿಮಾರ್ಗ ನೇಮಸ್ತಗುಂಟಾಗಿ ಭವಿಯ ಸಂಗವ ಕಳೆದ ಲಿಂಗೈಕ್ಯರನಲ್ಲದೊಲ್ಲ ಕೂಡಲಚೆನ್ನಸಂಗಯ್ಯ.