Index   ವಚನ - 98    Search  
 
ಪ್ರಾತಃಕಾಲದಲಗ್ರೋದಕವನು ತಂದು ಲಿಂಗದ ಅನುವನರಿವನು, ಪಾದೋದಕವನು ತಟ್ಟದೆ ಮುಟ್ಟದೆ ಕೊಂಬನು. ತನ್ನವಸರವೆಂದರಿಯದೆ ಲಿಂಗದವಸರವೆಂದರಿದು, ಮಹಾಮಜ್ಜನಾದಿಗಳಂ ಮಾಡಿಸಿ, ಲಿಂಗ ಸನ್ನಿಧಿಯಲು ಲಿಂಗೋದಕವ ಗ್ರಹಿಸುವ ಪ್ರಸಾದಿ, ಲಿಂಗಿಚ್ಛೆಯಾರೋಗಣೆಯಂ ಮಾಡಿಸಿ, ಪ್ರಸಾದದರಿವನೊಮ್ಮೆ ಅರಿವನು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆನು.