Index   ವಚನ - 119    Search  
 
ಆಚಾರವಂಗಸಂಬಂಧವಾದಲ್ಲಿ ಗುರುಲಿಂಗ ಸನ್ನಿಹಿತ, ಅರಿವು ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಿಹಿತ, ಈ ಉಭಯ ಲಿಂಗಸಂಬಂಧವಾದಲ್ಲಿ ಜಂಗಮಲಿಂಗ ಸನ್ನಹಿತ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗತ್ರಿವಿಧಸಂಪನ್ನ ಶರಣ ಸಂಗನ ಬಸವಣ್ಣನು.