Index   ವಚನ - 123    Search  
 
ತರುಮರಾದಿಗಳಲ್ಲಿಗೆ ಹೋಗಿ ಅನಂತಕಾಲ ತಪಸ್ಸಿಹುದರಿಂದ ಒಂದು ದಿನ ಗುರುಚರಣಸೇವೆ ಸಾಲದೆ? ಅನಂತಕಾಲ ಗುರುಚರಣಸೇವೆಯ ಮಾಡುವುದರಿಂದ ಒಂದು ದಿನ ಲಿಂಗಪೂಜೆ ಸಾಲದೆ? ಅನಂತಕಾಲ ಲಿಂಗಪೂಜೆಯ ಮಾಡುವುದರಿಂದ ಒಂದುದಿನ ಜಂಗಮ ತೃಪ್ತಿ ಸಾಲದೆ? ಅನಂತಕಾಲ ಜಂಗಮತೃಪ್ತಿಯ ಮಾಡುವುದರಿಂದ ಒಂದು ನಿಮಿಷ ನಿಮ್ಮ ಶರಣರ ಅನುಭಾವ ಸಾಲದೆ? ಕೂಡಲಚೆನ್ನಸಂಗಮದೇವಾ.