Index   ವಚನ - 139    Search  
 
ಅತಿಬಳ ಚಪಳಿಗ ಜಂಗಮ ರೂಪ ಸಂಸಾರಿಯಾದ ಕಾರಣ, ಭಕ್ತ ನಿಸ್ಸಂಸಾರಿಯಾದ ಕಾರಣ, ಈ ಸಂಸಾರಿಯ ವೈರಾಗ್ಯವೂ ಆ ಸಂಸಾರಿಯ ನಿಷ್ಠೆಯೂ ಒಂದಾದರೆ ತೆರಹಿಲ್ಲ ಕೂಡಲಚೆನ್ನಸಂಗಾ ನಿಮ್ಮಲ್ಲಿ.