Index   ವಚನ - 142    Search  
 
ವ್ಯವಹಾರವ ಮುಂದುಗೊಂಡಿದ್ದೆನಯ್ಯಾ, ಆನು ವ್ಯವಹಾರವ ಮುಂದುಗೊಂಡಿದ್ದೆನಯ್ಯಾ, ಮೊದಲುಗೆಡದ ಹರದೆನಗಾಯಿತ್ತಯ್ಯಾ. ಭವಗೇಡಿ ಲಿಂಗೈಕ್ಯರ ಒಡನಾಡಿ ಅವರ ಪರಿಯು ಎನ್ನ ಹತ್ತಿತಯ್ಯಾ. ಕೂಡಲಚೆನ್ನಸಂಗಯ್ಯಾ ಭಕ್ತರೆನ್ನ ಮರುಳು ಮಾಡಿತ್ತನೇನೆಂಬೆ!