Index   ವಚನ - 187    Search  
 
ಭಕ್ತಂಗಾಗಲಿ, ಜಂಗಮಕ್ಕಾಗಲಿ, ಸದಾಚಾರವುಳ್ಳವರಿಗೆ ಅನಾಯತ ಹೊದ್ದಬಾರದು. ಅನಾಯತವೆಂಬುದೆ ಅನುಸರಣೆ, ಅನುಸರಣೆಯೆಂಬುದೆ ಅಂಗದಿಚ್ಛೆ, ಅಂಗದಿಚ್ಛೆಯೆಂಬುದೆ ಅನಾಚಾರ, ಅನಾಚಾರವೆಂಬುದೆ ಪಾತಕ, ಆ ಪಾತಕವೆ ನರಕ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರವುಳ್ಳವರು ಅನಾಚಾರಕ್ಕೆ ಅನುಸರಿಸಿ ನಡೆದರೆ ನಾಯಕನರಕ.