Index   ವಚನ - 199    Search  
 
ಪ್ರಣವಮಂತ್ರವ ಕರ್ಣದಲ್ಲಿ ಹೇಳಿದಾತನೆ ಶ್ರೀಗುರು- ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ ನುಡಿಯ ಕೇಳಲಾಗದು. ಒಳಗಿಪ್ಪನೆ ಲಿಂಗದೇವ? ಮಲ ಮೂತ್ರ ಮಾಂಸವ ಹೇಸಿಕೆಯೊಳಗೆ ಪ್ರಾಣವಿಪ್ಪುದಲ್ಲದೆ, ಆ ಪ್ರಾಣನ ತಂದು ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯಬಲ್ಲಾತನೆ ಪ್ರಾಣಲಿಂಗ ಸಂಬಂಧಿ. ತನ್ನ ಇಷ್ಟಲಿಂಗದಲ್ಲಿ ದಾಸೋಹವ ಮಾಡಲರಿಯದೆ ಹಲವು ಬಯಕೆಯ ಬಯಸುವ ಮಿಟ್ಟೆಯ ಭಂಡರನೆನ್ನತ್ತ ತೋರದಿರು, ಕೂಡಲ ಚೆನ್ನಸಂಗಮದೇವಾ!