Index   ವಚನ - 208    Search  
 
ಲಿಂಗಪ್ರಸಾದಿಗಳಲ್ಲದವರ ಸಂಗ ಪಂಚಮಹಾಪಾತಕವೆಂದುದು ಗುರುವಚನ. ಲಿಂಗಪ್ರಸಾದಿಗಳಲ್ಲದವರ ಸಂಗ ಭಂಗವೆಂದುದು ಲಿಂಗವಚನ. 'ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ ಸಂಚರಂತಿ ಮಹಾಘೋರನರಕೇ ಕಾಲಮಕ್ಷಯಂ' ಎಂದುದಾಗಿ ಕೂಡಲ ಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಶರಣೆಂದು ಶುದ್ಧ.