Index   ವಚನ - 210    Search  
 
ಲಿಂಗವಿಲ್ಲದೆ ನಡೆವನ, ಲಿಂಗವಿಲ್ಲದೆ ನುಡಿವನ, ಲಿಂಗವಿಲ್ಲದವನಂಗ ಸೂತಕ. ಲಿಂಗಾಂಗಿ, ಲೌಕಿಕವ ಮುಟ್ಟಲಾಗದು. ಲಿಂಗವಿಲ್ಲದೆ ಗಮಿಸಿದಡೆ ಆ ನಡೆನುಡಿಗೊಮ್ಮೆ ಪಾತಕ. ಲಿಂಗವಿಲ್ಲದೆ ನುಡಿವ ಶಬ್ದವ ಕೇಳಲಾಗದು, ಶಿವಶಿವಾ! ಲಿಂಗವಿಲ್ಲದೆ ಉಗುಳು ನುಂಗಿದರೆ ಕಿಲ್ಬಿಷ, ಕೂಡಲಚೆನ್ನಸಂಗಮದೇವಾ.