Index   ವಚನ - 214    Search  
 
ಅರ್ಪಿತವಲ್ಲದೊಲ್ಲೆನೆಂದು ಭಕ್ತನಟ್ಟ ಮಡಕೆವೆರಸಿಕೊಟ್ಟ ವಿಧಿಯ ನೋಡಾ. ಅನ್ಯರಿಗಿಕ್ಕುವರೆ ಕೂಳಹುದೆ? ಬಂದ ಜಂಗಮಕ್ಕೆ ಓಗರವಹುದೆ? ಇಂತು ಪ್ರಸಾದ ಬೀಸರವೋದ ವ್ರತಗೇಡಿಯ ತೋರದಿರು, ಕೂಡಲಚೆನ್ನಸಂಗಮದೇವಾ.