Index   ವಚನ - 216    Search  
 
ಆರ ಮನೆಯ ಕೂಳನಾದರೆಯೂ ತಂದು, ಒಡಲ ಕುದಿಹಕ್ಕೆ ಲಿಂಗಾರ್ಪಿತವ ಮಾಡಿದರೆ ಅದು ಲಿಂಗಾರ್ಪಿತವಹುದೆ? ಅಲ್ಲ, ಅದು ಅನರ್ಪಿತ. "ಅರ್ಪಿತಂ ಚ ಗುರೋರ್ವಾಕ್ಯಾತ್ಕಿಲ್ಬಿಷಂ ಸ್ಯಾದನರ್ಪಿತಂ| ಯದ್ಯನರ್ಪಿತಂ ಭುಂಜೀಯಾತ್ ರೌರವಂ ನರಕಂ ವ್ರಜೇತ್"|| ತನುಸಾಹಿತ್ಯ ಮನಸಾಹಿತ್ಯ ಧನಸಾಹಿತ್ಯ ಲಿಂಗಸಾಹಿತ್ಯ ಪ್ರಸಾದಸಾಹಿತ್ಯವಾದ ಕಾರಣ, ಕೂಡಲಚೆನ್ನಸಂಗಮದೇವರಲ್ಲಿ ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು.