Index   ವಚನ - 219    Search  
 
ಅಂಗವಿರೋಧಿ ಶರಣ, ಲಿಂಗಪ್ರಾಣಪ್ರತಿಗ್ರಾಹಕ. ಅರ್ಥ ಪ್ರಾಣ ಅಬಿಮಾನ ವಿರೋಧಿ ಶರಣ, ಜಂಗಮಪ್ರಾಣಪ್ರತಿಗ್ರಾಹಕ. ರುಚಿ ವಿರೋಧಿ ಶರಣ, ಪ್ರಸಾದಪ್ರಾಣಪ್ರತಿಗ್ರಾಹಕ. ಈ ತ್ರಿವಿಧವ ಮೀರಿ ನಿಮ್ಮಲ್ಲಿ ನಿಂದ, ಕೂಡಲಚೆನ್ನಸಂಗಾ ನಿಮ್ಮ ಶರಣ.