Index   ವಚನ - 222    Search  
 
ಸ್ನಾನ ಸಂಧ್ಯಾ[ವಂದನ] ಜಪ ಹೋಮಾದಿ ಕ್ರೀಗಳು ನಿಮ್ಮ ಶರಣಂಗೆ ನೀವಲ್ಲದಿಲ್ಲಾಗಿ, ಇಲ್ಲಯ್ಯಾ. ಅನ್ಯಕಾರ್ಯ ಅನರ್ಪಿತ ನಿಮ್ಮ ಶರಣಂಗೆ ಲಿಂಗವನಗಲಿ ಇರನಾಗಿ, ಇಲ್ಲಯ್ಯಾ. ಆಗಮೋಕ್ತವಹ ಅರ್ಚನೆ ಆಹ್ವಾನ ವಿಸರ್ಜನೆ ನಿಮ್ಮ ಶರಣಂಗೆ ಅವಸಾನವಿಲ್ಲಾಗಿ, ಇಲ್ಲಯ್ಯಾ. ಇಂತಪ್ಪ ಭಕ್ತಿಯ ಪದವನರಿಯದೆ ಹರಿಬ್ರಹ್ಮಾದಿಗಳು ಬಂಧನಕ್ಕೊಳಗಾದರು. ಈ ಪದವನರಿದ ಕಾರಣ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲ, ಕೂಡಲಚೆನ್ನಸಂಗಯ್ಯನಲ್ಲಿ ದಾಸೋಹಿಯಾಗಿ.