Index   ವಚನ - 224    Search  
 
ಸಜ್ಜನ ಸದ್ಭಾವಿ ಅನ್ಯರಲ್ಲಿ ಕೈಯ್ಯಾಂತು ಬೇಡ, ಲಿಂಗವ ಮುಟ್ಟಿದ ಕೈಮೀಸಲು. ಕಂಗಳಲ್ಲಿ ಒಸೆದು ನೋಡ ಪರವಧುವ. ಮನದಲ್ಲಿ ನೆನೆಯನನ್ಯವ, ಮಾನವ ಸೇವೆಯ ಮಾಡ, ಲಿಂಗವ ಬೇಡ, ಲಿಂಗದ ಹಂಗನೊಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣ.