ಗುರುವೆನ್ನ ತನುವ ಬೆರಸಿದ ಕಾರಣ,
ಗುರುವಿನ ತನುವ ನಾ ಬೆರಸಿದ ಕಾರಣ,
ಗುರು ಶುದ್ಧನಾದನಯ್ಯಾ.
ಲಿಂಗವೆನ್ನ ಮನವ ಬೆರಸಿದ ಕಾರಣ,
ಲಿಂಗದ ಮನವ ನಾ ಬೆರಸಿದ ಕಾರಣ,
ಲಿಂಗ ಶುದ್ಧವಾದನಯ್ಯಾ.
ಜಂಗಮವೆನ್ನ ಜಿಹ್ವೆಯ ಬೆರಸಿದ ಕಾರಣ,
ಜಂಗಮದ ಜಿಹ್ವೆಯ ನಾ ಬೆರಸಿದ ಕಾರಣ,
ಜಂಗಮ ಶುದ್ಧನಾದನಯ್ಯಾ.
ಈ ಮೂವರು ತಮ್ಮಿಂದ ತಾವಾಗಲರಿಯದೆ
ಎನ್ನ ಮುಟ್ಟಿ ಶುದ್ಧವಾದರು ಕಾಣಾ,
ಕೂಡಲಚೆನ್ನಸಂಗಮದೇವಾ.