ಸದ್ಗುರು ಕಾರುಣ್ಯವ ಪಡೆದು,
ಪೂರ್ವಗುಣವಳಿದು, ಪುನರ್ಜಾತನಾದ ಬಳಿಕ
ಆ ಸದ್ಗುರು-ಪರಶಿವ-ಪ್ರಾಣಾತ್ಮ
-ಈ ತ್ರಿವಿಧವು ಏಕಾರ್ಥವಾಗಿ ಲಿಂಗ ಪ್ರವೇಶವಂ ಮಾಡಿ,
ಆ ಮಹಾಲಿಂಗವನು ಸದ್ಭಕ್ತಂಗೆ ಕರುಣಿಸಿ
ಪ್ರಾಣಲಿಂಗವಾಗಿ ಬಿಜಯಂಗೆಯಿಸಿ ಕೊಟ್ಟು,
ಲಿಂಗಪ್ರಾಣ ಪ್ರಾಣಲಿಂಗ ಲಿಂಗವಂಗ ಅಂಗಲಿಂಗವೆನಿಸಿ,
ಭಕ್ತಕಾಯ ಮಮಕಾಯವಾಗಿ
ಅಂಗದ ಮೇಲೆ ಲಿಂಗಸ್ಥಾಪ್ಯವಂ ಮಾಡಿ,
‘ಆ ಮಹಾಲಿಂಗಕ್ಕೆ ಅಷ್ಟವಿಧಾರ್ಚನೆ
ಷೋಡಶೋಪಚಾರವನು ಮಾಡು’
ಎಂದು ಶ್ರೀ ಗುರುವಾಜ್ಞೆಯಂ ಮಾಡಲು,
‘ಮಹಾಪ್ರಸಾದ’ವೆಂದು ಆಜ್ಞೆಯಂ ಕೈಕೊಂಡು
ಕ್ರಿಯಾಮಾರ್ಗದಿಂ ಮಾಡುವಲ್ಲಿ,
ದೀಪಾರಾಧನೆ ಪರಿಯಂತರ ಆಗಮಮಾರ್ಗದಲು ಮಾಡಿ
ನೈವೇದ್ಯ ಕ್ರೀಯಮಾಡುವಲ್ಲಿ,
ಸರ್ವ ರಸ-ಫಲ-ಪುಷ್ಪ ಪಾಕಾದಿ ಮಹಾದ್ರವ್ಯಂಗಳನು
[ಜಿಹ್ವೆಯಿಂ ಸವಿದು ಕುರುಚಿಯಂ ಕಳೆದು,
ಸುರುಚಿಯಂ ಜಿಹ್ವೆಯಿಂ]
ಪಂಚೇಂದ್ರಿಯಂಗಳ ಪಂಚಸ್ಥಾನ ಪ್ರವೇಶವಾದ
ಮಹಾಲಿಂಗಕ್ಕೆ ಅರ್ಪಿಸುವಲ್ಲಿ
[ಸ್ವಯಭಾಜನವೋ? ಲಿಂಗಭಾಜನವೋ?
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ.
ಜಿಹ್ವೆಯಿಂ ಸುರುಚಿ ಲಿಂಗಕ್ಕರ್ಪಿತವಾಯಿತ್ತು.]
ದ್ರವ್ಯಂಗಳ ಸುರೂಪವನು ಶ್ವೇತ ಪೀತ ಹರಿತ
ಮಾಂಜಿಷ್ಟ ಕೃಷ್ಣ ಕಪೋತ
ಷಡುವರ್ಣ ಮಿಶ್ರವಾದ
ಮೂವತ್ತಾರು ಬಹುವಿಧ ವರ್ಣಂಗಳನು,
ಕಂಗಳಲ್ಲಿ ನೋಡಿ, ಕಂಡು, ಅರಿದು, ಕುರೂಪವ ಕಳೆದು,
ಸುರೂಪವನು ಕಂಗಳಿಂದ ಲಿಂಗಕ್ಕರ್ಪಿಸುವಲ್ಲಿ
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ,
ಸುಶಬ್ದದ್ರವ್ಯಂಗಳು ಶ್ರೋತ್ರದಿಂ ಲಿಂಗಕ್ಕರ್ಪಿತವಾಯಿತ್ತು.
ನಾದಮಂತ್ರಂಗಳಾದಿಯಾದ ಶಬ್ಧವನು
ಶ್ರೋತ್ರದಿಂ ಕೇಳಿ, ಕುಶಬ್ಧವನೆ ಕಳೆದು
ಸುಶಬ್ಧವನು ಶ್ರೋತ್ರದಿಂ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗ ಭಾಜನವೋ?
ಆ ಕಾಲದಲು ಸೂತಕವಿಲ್ಲ ದೋಷವಿಲ್ಲ,
ಸುಶಬ್ಧದ್ರವ್ಯಂ ಶ್ರೋತ್ರದಿಂ ಲಿಂಗಕ್ಕರ್ಪಿತವಾಯಿತ್ತು.
ದ್ರವ್ಯಂಗಳ ಸುಗಂಧ ದುರ್ಗಂಧಗಳನು
ಘ್ರಾಣವರಿದು, ಘ್ರಾಣ ವಾಸಿಸಿ
ದುರ್ಗಂಧವ ಕಳೆದು ಸುಗಂಧವನು
ಘ್ರಾಣದಿಂ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗ ಭಾಜನವೋ?
ಆ ಕಾಲದಲು ಸೂತಕವಿಲ್ಲ ದೋಷವಿಲ್ಲ;
ಘ್ರಾಣದಿಂ ಸುಗಂಧ ಲಿಂಗಾರ್ಪಿತವಾಯಿತ್ತು.
ದ್ರವ್ಯಂಗಳ ಮೃದು ಕಠಿಣ ಶೀತೋಷ್ಣಂಗಳನು
ಸ್ಪರುಶನದಿಂ ಸ್ಪರುಶಿಸಿ
ಸುಸ್ಪರುಶನವರಿದು ತತ್ಕಾಲೋಚಿತ ದ್ರವ್ಯಂಗಳನು
ಅನುವರಿದು ಸ್ಪರುಶಿಸಿ ಲಿಂಗಕ್ಕರ್ಪಿಸುವಲ್ಲಿ
ಸ್ವಯಭಾಜನವೋ? ಲಿಂಗಭಾಜನವೋ?
ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ,
ದ್ರವ್ಯಂಗಳ ಮೃದುಕಠಿಣ ಶೀತೋಷ್ಣಂಗಳು
ಸ್ಪರುಶನದಿಂ ಲಿಂಗಾರ್ಪಿತವಾಯಿತ್ತು.
ಮಹಾದ್ರವ್ಯಂಗಳ ರೂಪು
ಶಬ್ದ ಗಂಧ ರಸ ಮೃದು ಕಠಿಣ ಶೀತೋಷ್ಣ
ಮೊದಲಾದುವು ಇಂದ್ರಿಯಂಗಳಿಂದ
ಲಿಂಗಾರ್ಪಿತವಾಯಿತ್ತು.
ದ್ರವ್ಯಂಗಳ ಸುರೂಪವನು ಕಂಗಳಿಂದರ್ಪಿಸುವಂತೆ
ಶ್ರೋತ್ರ ಘ್ರಾಣ ಸ್ಪರ್ಶ ಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು,
ಕಂಗಳಲ್ಲಿ ರೂಪನರ್ಪಿಸಬೇಕು.
ಸುಶಬ್ದವನು ಶ್ರೋತ್ರದಿಂದರ್ಪಿಸುವಂತೆ,
ಚಕ್ಷು ಘ್ರಾಣ ಜಿಹ್ವೆ ಸ್ಪರ್ಶ ಮೊದಲಾದ
ನಾಲ್ಕು ಇಂದ್ರಿಯಂಗಳಿಂದರ್ಪಿಸಬಾರದು,
ಸುಶಬ್ದವನು ಶ್ರೋತ್ರದಿಂದವೆ ಅರ್ಪಿಸಬೇಕು.
ಸುಗಂಧವನು ಘ್ರಾಣದಿಂದರ್ಪಿಸುವಂತೆ
ನೇತ್ರ ಶ್ರೋತ್ರ ಸ್ಪರ್ಶ ಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು,
ಸುಗಂಧವನು ಘ್ರಾಣದಿಂದವೆ ಅರ್ಪಿಸಬೇಕು.
ಮೃದು ಕಠಿಣ ಶೀತೋಷ್ಣಂಗಳನು
ಸ್ಪರುಶನದಿಂದರ್ಪಿಸುವಂತೆ
ನೇತ್ರ ಶ್ರೋತ್ರ ಘ್ರಾಣ ಜಿಹ್ವೆ ಮೊದಲಾದ
ನಾಲ್ಕು ಇಂದ್ರಿಯಂಗಳಿಂದ ಅರ್ಪಿಸಬಾರದು,
ಮೃದು ಕಠಿಣ ಶೀತೋಷ್ಣ ದ್ರವ್ಯಂಗಳನು
ಸ್ಪರುಶನದಿಂದರ್ಪಿಸಬೇಕು.
ನಾಲ್ಕು ಇಂದ್ರಿಯದಿಂ ರೂಪು
ಶಬ್ದಗಂಧ ಮೃದುಕಠಿಣ ಶೀತೋಷ್ಣ
[ದ್ರವ್ಯಂಗಳು ಲಿಂಗಾರ್ಪಿತವಾಯಿತ್ತು.]
ಮಹಾದ್ರವ್ಯಂಗಳ ಸುರಸವನು ಮಹಾರುಚಿಯನು
ಜಿಹ್ವೆಯಿಂದರ್ಪಿಸುವಂತೆ
ನೇತ್ರ ಶ್ರೋತ್ರ ಘ್ರಾಣ ಸ್ಪರುಶನ ಮೊದಲಾದ
ಈ ನಾಲ್ಕು ಇಂದ್ರಿಯಂಗಳಿಂದರ್ಪಿಸಬಹುದೆ?
ಹೇಳಿರಣ್ಣಾ.
ಮಹಾರಸವನು ಮಹಾರುಚಿಯನು
ಜಿಹ್ವೆಯಿಂದವೆ ಅರ್ಪಿಸಬೇಕು.
ಅಹಂಗಲ್ಲದೆ ಲಿಂಗಾರ್ಪಿತವಾಗದು,
ಆ ಲಿಂಗದ ಆರೋಗಣೆಯಾಗದು.
ಮಹಾರಸವನು ರುಚಿಯನು ಜಿಹ್ವೆಯಿಂದರ್ಪಿಸುವಲ್ಲಿ
ಸೂತಕವೆಂದು ದೋಷವೆಂದು
ಸ್ವಯಭಾಜನವಾಗದೆಂದು
ಭಿನ್ನಭಾಜನವಾಗಬೇಕೆಂದು
ದೇವರ ಆರೋಗಣೆಗೆ ಮುನ್ನವೇ ಇದ್ದ
ಪರಿಯಾಣವ ತೆಗೆದ ಕಷ್ಟವ ನೋಡಾ!
ಅಗಲನಾರಡಿಗೊಂಬ ಪಾಪವ ನೋಡಾ
ಅಕಟಕಟಾ! ಈ ಪರಿಯೆ ಲಿಂಗಾರ್ಚನೆ?
ಈ ಪರಿಯೆ ಲಿಂಗಾರ್ಪಿತವ ಮಾಡಿ
ಪ್ರಸಾದವ ಪಡೆವ ಪರಿ?
ಈ ಪರಿಯೆ ಭಕ್ತಿ? ಈ ಪರಿಯೆ ಜ್ಞಾನ?
ಇಂತಲ್ಲ ಕೇಳಿರಣ್ಣಾ, ಕರ್ತೃ ಭೃತ್ಯ ಸಂಬಂಧದ ಪರಿ.
ದೇವರ ಪರಿಯಾಣದಲು ದೇವರಿಗೆ ಬಂದ
ಸರ್ವದ್ರವ್ಯಮಹಾರಸಂಗಳನು,
ಮಹಾರುಚಿಯನು ಭಕ್ತದೇಹಿಕ ದೇವನಾಗಿ
ದೇವರ ಜಿಹ್ವೆಯಲ್ಲಿ ದೇವಾಧಿದೇವ
ಮಹಾದೇವಂಗರ್ಪಿಸಬೇಕು.
ಸ್ಮೃತಿ:
‘ರೂಪಂ ಸಮರ್ಪಿತಂ ಶುದ್ಧಂ ರುಚಿಃ ಸಿದ್ಧಂ ತು ವಿಶ್ರುತಂ|
ಏ ತತ್ಸಮಾಗತಾ ತೃಪ್ತಿಃ ಪ್ರಸಿದ್ಧಂತು ಪ್ರಸಾದಕಂ||
ದರ್ಪಣಂ ಧೂಪದೀಪೌ ಚ ನಾನಾರುಚಿ ಸುಖಂ ಬಹು|
ಪ್ರಸಾದ ಏವ ಭೋಕ್ತವ್ಯೋ ಅನ್ಯದ್ಗೋಮಾಂಸಸನ್ನಿಭಂ||
ರೂಪಂ ಸಮರ್ಪಯೇದ್ದ್ರವ್ಯಂ ರುಚಿಮಪ್ಯರ್ಪಯೇತ್ತತಃ|
ಉಭಯಾರ್ಪಣಹೀನಶ್ಚೇತ್ ಪ್ರಸಾದೋ ನಿಷ್ಫಲೋ ಭವೇತ್||
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ|
ರಸಾನ್ ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ||
ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧೋ ಮಹಾರುಚಿಃ|
ತತ್ತಲ್ಲಿಂಗಮುಖೇನೈವ ಅರ್ಪಿತಂ ಸ್ಯಾತ್ಸಮರ್ಪಣಂ||
ಅರ್ಪಿತಾನರ್ಪಿತಂ ಸ್ಥಾನಂ ಇಂದ್ರಿಯಾದಿಂದ್ರಿಯಂ ಯಥಾ|
ಇಂದ್ರಿಯಸ್ಥಾನತತ್ಕರ್ಮ ಸಮರ್ಪಿತಕ್ರಿಯಾರ್ಪಿತಂ||
[ಅರ್ಪಣಂ ದ್ವಿವಿಧಂ ಪ್ರೋಕಂ?] ಜ್ಞಾನಾರ್ಪಣಕ್ರಿಯಾರ್ಪಣೇ|
ಉಭಯಾರ್ಪಣಹೀನಸ್ಯ ಪ್ರಸಾದೋ ನಿಷ್ಫಲೋ ಭವೇತ್||
ಗರ್ಬಿಣ್ಯಾ ಗರ್ಭದೇಹಸ್ಯ ಸರ್ವಭೋಗಸ್ಸಮೋ ಭವೇತ್|
ಲಿಂಗಿನಾಂ ಲಿಂಗಭೋಗೇನ ಪ್ರಸಾದಃ ಸಹ ಸಂಭವೇತ್||
ಗರ್ಬಿಣೀ ಸರ್ವಭೋಗೇಷು ಶಿಶೂನಾಂ ತೃಪ್ತಿಸಂಭವಃ|
ಲಿಂಗಿನಾಂ ಲಿಂಗಭೋಗೇಷು ಪ್ರಸಾದಸ್ಸಂಭವೇತ್ತಥಾ||
ಯಥಾ ಚ ಗರ್ಭಿಣೀ ಭೋಗೇ ಶಿಶೂನಾಂ ತೃಪ್ತಿಸಂಭವಃ
ತಥಾ ಲಿಂಗಸ್ಯ ಭೋಗೇಷು ಅಂಗಸ್ತೃಪ್ತಿಮವಾಪ್ನುಯಾತ್||
ಗರ್ಭೀಕೃತಸ್ಯ ಪ್ರಾಣಸ್ತು ಗರ್ಭಣೀಭೋಗಮಾಶ್ರಿತಃ|
ಲಿಂಗಗರ್ಭೀಕೃತೋ ಲಿಂಗೀ ಲಿಂಗಭೋಗಸಮಾಶ್ರಿತಃ||
ಮತ್ತೊಂದಾಗಮದಲ್ಲಿ:
ಭಕ್ತಕಾಯೋ ಮಹಾದೇವೋ ಭಕ್ತಾತ್ಮಾ ಚ ಸದಾಶಿವಃ|
ಭಕ್ತಭೋಗೋಪಭೋಗಶ್ಚ ಭೋಗಸ್ತಸ್ಯ ವಿಧೀಯತೇ||
ಲಿಂಗದೇಹೀ ಶಿವಾತ್ಮಾssಯಂ ಲಿಂಗಾಚಾರೋ ನ ಲೌಕಿಕಃ|
ಸರ್ವಲಿಂಗಮಯಂ ರೂಪಂ ಲಿಂಗೇನ ಸಮಮಶ್ನುತೇ||
ಘ್ರಾಣಸ್ತಸ್ಯೈವ ಘ್ರಾಣಶ್ಚ ದೃಷ್ಟಿರ್ದೃಷ್ಟಿಃ ಶ್ರುತಿಃ ಶ್ರುತಿಃ|
ಸ್ಪರ್ಶನಂ ಸ್ಪರ್ಶನಂ ವಿಂದ್ಯಾದ್ ಗ್ರಾಹ್ಯಂ ತದ್ಗ್ರಾಹ್ಯಮೇವ ಚ||
ಭುಕ್ತಂ ತದ್ಭುಕ್ತಮಾಖ್ಯಾತಂ ತೃಪ್ತಿಸ್ತತ್ತೃಪ್ತಿರೇವ ಚ|
ತಸ್ಯೈಕಃ ಪ್ರಾಣ ಆಖ್ಯಾತ ಇತ್ಯೇತತ್ಸಹವರ್ತಿನಾಂ||
ಲಿಂಗದೃಷ್ಟಿನಿರೀಕ್ಷಾ ಸ್ಯಾಲ್ಲಿಂಗಹಸ್ತೋಪಸ್ಪರ್ಶನಂ|
ಲಿಂಗಶ್ರೋತ್ರೇಣ ಶ್ರವಣಂ ಲಿಂಗಜಿಹ್ವಾರಸಾನ್ನವಾನ್||
ಲಿಂಗಘ್ರಾಣಸ್ತು ಘ್ರಾಣಶ್ಚ ಲಿಂಗೇನ ಸಹ ವರ್ತತೇ|
ಲಿಂಗಂ ಮನೋಗತಂ ವಾಪಿ ಇತ್ಯೇತೈಃ ಸಹಭೋಜನಂ||
ಲೋಕಾಚಾರನಿಬದ್ಧಸ್ತು ಲೋಕಾಲೋಕವಿವರ್ಜಿತಃ|
ಲೋಕಾಚಾರಪರಿತ್ಯಾಗೀ ಪ್ರಾಣಲಿಂಗೀತಿ ಸಂಸ್ಮೃತಃ||
ನ ಪ್ರಾಣಲಿಂಗಿನಃ ಕಾಲೋ ನ ಲಿಂಗಪ್ರಾಣಿನಃ ಕ್ರಿಯಾ|
ಕಾಲಕರ್ಮದ್ವಯಂ ನಾಸ್ತಿ ಶರಣಸ್ಯ ಪ್ರಸಾದತಃ’||
ಇಂತೆಂದುದಾಗಿ
ಇದು ಲಿಂಗಾರ್ಚನೆಯ ಪರಿ,
ಇಂತಲ್ಲದೆ ರುಚಿಯರ್ಪಿತಕ್ಕೆ ಮುನ್ನವೆ
ಪರಿಯಾಣವ ತೆಗೆಯಲು ಲಿಂಗಾರ್ಚನೆಯ ಕ್ರೀ ತಪ್ಪಿತ್ತು.
ಶ್ರೀ ಗುರುವಾಜ್ಞೆಯ ಮೀರಿದವನು ಜ್ಞಾನಿಯಲ್ಲ, ಭಕ್ತನಲ್ಲ ಕೇಳಿರೇ.
ಆವನಾನು ಮಹಾರಾಜಂಗೆ ಆರೋಗಣೆಗೆ ಮುನ್ನವೆ
ಪರಿಯಾಣವ ತೆಗೆಯಲು ದ್ರೋಹ, ಶಾಸ್ತಿಗೊಳಗಾದರು,
ಇದು ದೃಷ್ಟ ನೋಡಿರೆ.
ರಾಜಾದಿರಾಜ ಮಹಾರಾಜ ದೇವಾದಿದೇವ ಮಹಾದೇವಂಗೆ
ಆರೋಗಣೆಗೆ ಮುನ್ನ ಪರಿಯಾಣವ ತೆಗೆಯಲು ಮಹಾದ್ರೋಹ.
ಇದನರಿದು ಶ್ರೀ ಗುರುವಾಜ್ಞೆಯ ತಪ್ಪದೆ, ಲಿಂಗಾರ್ಚನೆಯ ಕ್ರೀ ತಪ್ಪದೆ
ದೇವರ ಪರಿಯಾಣದಲು ಮಹಾರಸ ದ್ರವ್ಯ ಪದಾರ್ಥಂಗಳನಿಟ್ಟು
ಶ್ರೀಗುರು ಸಹಿತ ಜಂಗಮಸಹಿತ
ಲಿಂಗಾರ್ಪಿತ ಮಾಡುವುದು.
ಪಂಚೇಂದ್ರಿಯಗಳ ಪಂಚಸ್ಥಾನ
ಪ್ರವೇಶವಾದ ಮಹಾಲಿಂಗಕ್ಕೆ,
ಶಬ್ದ ಸ್ಪರ್ಶ ರೂಪ ರಸ [ಗಂಧಂಗಳನು]
ಮನೋವಾಕ್ಕಾಯದಲ್ಲಿ ಭೋಗಿಸುವ
ಭೋಗವೆಲ್ಲವನು ಅರ್ಪಿಸುವುದು.
ಮೇಲೆ ತಾಂಬೂಲದಿಂ ಅಷ್ಟವಿಧಾರ್ಚನೆ
ಷೋಡಶೋಪಚಾರವನು ಮಾಡಿ,
ಲಿಂಗಾರ್ಚನೆಯಂ ಮಾಡಿ,
ಪ್ರಸಾದವ ಹಡದು, ಆ ಮಹಾಪ್ರಸಾದದಿಂ
ಪ್ರಸಾದಿಯಪ್ಪುದು ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Sadguru kāruṇyava paḍedu,
pūrvaguṇavaḷidu, punarjātanāda baḷika
ā sadguru-paraśiva-prāṇātma
-ī trividhavu ēkārthavāgi liṅga pravēśavaṁ māḍi,
ā mahāliṅgavanu sadbhaktaṅge karuṇisi
prāṇaliṅgavāgi bijayaṅgeyisi koṭṭu,
liṅgaprāṇa prāṇaliṅga liṅgavaṅga aṅgaliṅgavenisi,
bhaktakāya mamakāyavāgi
aṅgada mēle liṅgasthāpyavaṁ māḍi,
‘ā mahāliṅgakke aṣṭavidhārcane
ṣōḍaśōpacāravanu māḍu’
endu śrī guruvājñeyaṁ māḍalu,
‘mahāprasāda’vendu ājñeyaṁ kaikoṇḍu
kriyāmārgadiṁ māḍuvalli,
Dīpārādhane pariyantara āgamamārgadalu māḍi
naivēdya krīyamāḍuvalli,
sarva rasa-phala-puṣpa pākādi mahādravyaṅgaḷanu
[jihveyiṁ savidu kuruciyaṁ kaḷedu,
suruciyaṁ jihveyiṁ]
pan̄cēndriyaṅgaḷa pan̄casthāna pravēśavāda
mahāliṅgakke arpisuvalli
[svayabhājanavō? Liṅgabhājanavō?
Ā kāladalu sūtakavilla, dōṣavilla.
Jihveyiṁ suruci liṅgakkarpitavāyittu.]
Dravyaṅgaḷa surūpavanu śvēta pīta harita
mān̄jiṣṭa kr̥ṣṇa kapōta
ṣaḍuvarṇa miśravāda
mūvattāru bahuvidha varṇaṅgaḷanu,
Kaṅgaḷalli nōḍi, kaṇḍu, aridu, kurūpava kaḷedu,
surūpavanu kaṅgaḷinda liṅgakkarpisuvalli
ā kāladalu sūtakavilla, dōṣavilla,
suśabdadravyaṅgaḷu śrōtradiṁ liṅgakkarpitavāyittu.
Nādamantraṅgaḷādiyāda śabdhavanu
śrōtradiṁ kēḷi, kuśabdhavane kaḷedu
suśabdhavanu śrōtradiṁ liṅgakkarpisuvalli
svayabhājanavō? Liṅga bhājanavō?
Ā kāladalu sūtakavilla dōṣavilla,
suśabdhadravyaṁ śrōtradiṁ liṅgakkarpitavāyittu.
Dravyaṅgaḷa sugandha durgandhagaḷanu
ghrāṇavaridu, ghrāṇa vāsisi
Durgandhava kaḷedu sugandhavanu
ghrāṇadiṁ liṅgakkarpisuvalli
svayabhājanavō? Liṅga bhājanavō?
Ā kāladalu sūtakavilla dōṣavilla;
ghrāṇadiṁ sugandha liṅgārpitavāyittu.
Dravyaṅgaḷa mr̥du kaṭhiṇa śītōṣṇaṅgaḷanu
sparuśanadiṁ sparuśisi
susparuśanavaridu tatkālōcita dravyaṅgaḷanu
Anuvaridu sparuśisi liṅgakkarpisuvalli
svayabhājanavō? Liṅgabhājanavō?
Ā kāladalu sūtakavilla, dōṣavilla,
dravyaṅgaḷa mr̥dukaṭhiṇa śītōṣṇaṅgaḷu
sparuśanadiṁ liṅgārpitavāyittu.
Mahādravyaṅgaḷa rūpu
śabda gandha rasa mr̥du kaṭhiṇa śītōṣṇa
modalāduvu indriyaṅgaḷinda
liṅgārpitavāyittu.
Dravyaṅgaḷa surūpavanu kaṅgaḷindarpisuvante
śrōtra ghrāṇa sparśa jihve modalāda
nālku indriyaṅgaḷalli arpisabāradu,
kaṅgaḷalli rūpanarpisabēku.
Suśabdavanu śrōtradindarpisuvante,
cakṣu ghrāṇa jihve sparśa modalāda
nālku indriyaṅgaḷindarpisabāradu,
suśabdavanu śrōtradindave arpisabēku.
Sugandhavanu ghrāṇadindarpisuvante
nētra śrōtra sparśa jihve modalāda
nālku indriyaṅgaḷalli arpisabāradu,
sugandhavanu ghrāṇadindave arpisabēku.
Mr̥du kaṭhiṇa śītōṣṇaṅgaḷanu
sparuśanadindarpisuvante
nētra śrōtra ghrāṇa jihve modalāda
nālku indriyaṅgaḷinda arpisabāradu,
Mr̥du kaṭhiṇa śītōṣṇa dravyaṅgaḷanu
sparuśanadindarpisabēku.
Nālku indriyadiṁ rūpu
śabdagandha mr̥dukaṭhiṇa śītōṣṇa
[dravyaṅgaḷu liṅgārpitavāyittu.]
Mahādravyaṅgaḷa surasavanu mahāruciyanu
jihveyindarpisuvante
nētra śrōtra ghrāṇa sparuśana modalāda
ī nālku indriyaṅgaḷindarpisabahude?
Hēḷiraṇṇā.
Mahārasavanu mahāruciyanu
jihveyindave arpisabēku.
Ahaṅgallade liṅgārpitavāgadu,
ā liṅgada ārōgaṇeyāgadu.
Mahārasavanu ruciyanu jihveyindarpisuvalli
sūtakavendu dōṣavendu
svayabhājanavāgadendu
bhinnabhājanavāgabēkendu
Dēvara ārōgaṇege munnavē idda
pariyāṇava tegeda kaṣṭava nōḍā!
Agalanāraḍigomba pāpava nōḍā
akaṭakaṭā! Ī pariye liṅgārcane?
Ī pariye liṅgārpitava māḍi
prasādava paḍeva pari?
Ī pariye bhakti? Ī pariye jñāna?
Intalla kēḷiraṇṇā, kartr̥ bhr̥tya sambandhada pari.
Dēvara pariyāṇadalu dēvarige banda
sarvadravyamahārasaṅgaḷanu,
mahāruciyanu bhaktadēhika dēvanāgi
dēvara jihveyalli dēvādhidēva
mahādēvaṅgarpisabēku.
Smr̥ti:
‘Rūpaṁ samarpitaṁ śud'dhaṁ ruciḥ sid'dhaṁ tu viśrutaṁ|
ē tatsamāgatā tr̥ptiḥ prasid'dhantu prasādakaṁ||
darpaṇaṁ dhūpadīpau ca nānāruci sukhaṁ bahu|
prasāda ēva bhōktavyō an'yadgōmānsasannibhaṁ||
rūpaṁ samarpayēddravyaṁ rucimapyarpayēttataḥ|
ubhayārpaṇahīnaścēt prasādō niṣphalō bhavēt||
naivēdyaṁ puratō n'yastaṁ darśanāt svīkr̥taṁ mayā|
rasān bhaktasya jihvāgrādaśnāmi kamalōdbhava||
śabdaḥ sparśaśca rūpaṁ ca rasō gandhō mahāruciḥ|
tattalliṅgamukhēnaiva arpitaṁ syātsamarpaṇaṁ||
Arpitānarpitaṁ sthānaṁ indriyādindriyaṁ yathā|
indriyasthānatatkarma samarpitakriyārpitaṁ||
[arpaṇaṁ dvividhaṁ prōkaṁ?] Jñānārpaṇakriyārpaṇē|
ubhayārpaṇahīnasya prasādō niṣphalō bhavēt||
garbiṇyā garbhadēhasya sarvabhōgas'samō bhavēt|
liṅgināṁ liṅgabhōgēna prasādaḥ saha sambhavēt||
garbiṇī sarvabhōgēṣu śiśūnāṁ tr̥ptisambhavaḥ|
liṅgināṁ liṅgabhōgēṣu prasādas'sambhavēttathā||
yathā ca garbhiṇī bhōgē śiśūnāṁ tr̥ptisambhavaḥ
Tathā liṅgasya bhōgēṣu aṅgastr̥ptimavāpnuyāt||
garbhīkr̥tasya prāṇastu garbhaṇībhōgamāśritaḥ|
liṅgagarbhīkr̥tō liṅgī liṅgabhōgasamāśritaḥ||
mattondāgamadalli:
Bhaktakāyō mahādēvō bhaktātmā ca sadāśivaḥ|
bhaktabhōgōpabhōgaśca bhōgastasya vidhīyatē||
liṅgadēhī śivātmāssyaṁ liṅgācārō na laukikaḥ|
sarvaliṅgamayaṁ rūpaṁ liṅgēna samamaśnutē||
ghrāṇastasyaiva ghrāṇaśca dr̥ṣṭirdr̥ṣṭiḥ śrutiḥ śrutiḥ|
sparśanaṁ sparśanaṁ vindyād grāhyaṁ tadgrāhyamēva ca||
Bhuktaṁ tadbhuktamākhyātaṁ tr̥ptistattr̥ptirēva ca|
tasyaikaḥ prāṇa ākhyāta ityētatsahavartināṁ||
liṅgadr̥ṣṭinirīkṣā syālliṅgahastōpasparśanaṁ|
liṅgaśrōtrēṇa śravaṇaṁ liṅgajihvārasānnavān||
liṅgaghrāṇastu ghrāṇaśca liṅgēna saha vartatē|
liṅgaṁ manōgataṁ vāpi ityētaiḥ sahabhōjanaṁ||
Lōkācāranibad'dhastu lōkālōkavivarjitaḥ|
lōkācāraparityāgī prāṇaliṅgīti sansmr̥taḥ||
na prāṇaliṅginaḥ kālō na liṅgaprāṇinaḥ kriyā|
kālakarmadvayaṁ nāsti śaraṇasya prasādataḥ’||
intendudāgi
idu liṅgārcaneya pari,
intallade ruciyarpitakke munnave
pariyāṇava tegeyalu liṅgārcaneya krī tappittu.
Śrī guruvājñeya mīridavanu jñāniyalla, bhaktanalla kēḷirē.
Āvanānu mahārājaṅge ārōgaṇege munnave
Pariyāṇava tegeyalu drōha, śāstigoḷagādaru,
idu dr̥ṣṭa nōḍir
ಸ್ಥಲ -
ಪ್ರಸಾದಿಯ ಜ್ಞಾನಿಸ್ಥಲ