Index   ವಚನ - 234    Search  
 
ಹೊನ್ನು ಭಕ್ತನೆಂಬೆನೆ? ಹೊನ್ನಿನೊಳಗಣ ಮುದ್ರೆ ಭವಿ. ಹೆಣ್ಣು ಭಕ್ತನೆಂಬೆನೆ? ಹೆಣ್ಣಿನೊಳಗಣ ವಿರಹ ಭವಿ. ಮಣ್ಣು ಭಕ್ತನೆಂಬೆನೆ? ಮಣ್ಣಿನೊಳಗಣ ಬೆಳೆಸು ಭವಿ. ಈ ತ್ರಿವಿಧ ಭವಿಯ ಕಳೆದು ಪ್ರಸಾದವ ಮಾಡಿಕೊಳ್ಳಬಲ್ಲರೆ ಕೂಡಲಚೆನ್ನಸಂಗನಲ್ಲಿ ಅಚ್ಚಶೀಲವಂತನೆಂಬೆ.