Index   ವಚನ - 239    Search  
 
ಅಷ್ಟವಿಧಾರ್ಚನೆಯ ಮಾಡಬಲ್ಲರೆ ಅಂಗಸುಖಂಗಳನರಿಯದಿರಬೇಕು. ಲಿಂಗಾರ್ಚನೆಯ ಮಾಡಬಲ್ಲರೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಲ್ಲದಿರಬೇಕು. ಪ್ರಸಾದ ಭೋಗವ ಮಾಡಬಲ್ಲರೆ ಹಸಿವು ತೃಷೆ ಆಪ್ಯಾಯನಂಗಳಡಗಿರಬೇಕು. ಇಂತಲ್ಲದಡೆ, ಕೂಡಲಚೆನ್ನಸಂಗನಲ್ಲಿ ಬರಿ ಉಪಾಧಿಕರೆಂಬೆ.